Loading Bible Translation
First-time download in progress. This may take a few seconds…
Kannada Holy Bible Wordproject Bible
6 verses
1ಆ ಮೇಲೆ ಶೂಹ್ಯನಾದ ಬಿಲ್ದದನು ಉತ್ತರಕೊಟ್ಟು ಹೇಳಿದ್ದೇನಂದರೆ --
2ದೊರೆ ತನವೂ ಹೆದರಿಕೆಯೂ ಆತನೊಂದಿಗೆ ಇವೆ; ತನ್ನ ಉನ್ನತ ಸ್ಥಳಗಳಲ್ಲಿ ಆತನು ಸಮಾಧಾನ ಮಾಡುತ್ತಾನೆ.
3ಆತನ ಸೈನ್ಯಗಳಿಗೆ ಲೆಕ್ಕ ಉಂಟೋ? ಆತನ ಬೆಳಕು ಯಾರ ಮೇಲೆ ಮೂಡುವದಿಲ್ಲ?
4ಮನುಷ್ಯನು ದೇವರ ಬಳಿಯಲ್ಲಿ ನೀತಿವಂತನಾಗುವದು ಹೇಗೆ? ಸ್ತ್ರೀಯಿಂದ ಹುಟ್ಟಿದವನು ನಿರ್ಮಲನಾಗಿರುವದು ಹೇಗೆ?
5ಇಗೋ, ಚಂದ್ರನಾದರೂ ಹೊಳೆಯು ವದಿಲ್ಲ. ನಕ್ಷತ್ರಗಳಾದರೂ ಆತನ ದೃಷ್ಟಿಗೆ ನಿರ್ಮಲವಾ ಗಿರುವದಿಲ್ಲ.
6ಮನುಷ್ಯನೆಂಬ ಹುಳವೂ ಮನುಷ್ಯನ ಮಗನೆಂಬ ಕ್ರಿಮಿಯೂ ಎಷ್ಟು ಮಾತ್ರದವನು?