Loading Bible Translation
First-time download in progress. This may take a few seconds…
Kannada Holy Bible Wordproject Bible
9 verses
1ಕರ್ತನ ಆಲಯಕ್ಕೆ ಹೋಗೋಣ ಎಂದು ಅವರು ನನಗೆ ಹೇಳಿದಾಗ ನನಗೆ ಸಂತೋಷವಾಯಿತು.
2ಓ ಯೆರೂಸಲೇಮೇ, ನಮ್ಮ ಪಾದಗಳು ನಿನ್ನ ಬಾಗಲುಗಳಲ್ಲಿ ನಿಲ್ಲುತ್ತವೆ.
3ಯೆರೂಸಲೇಮು ಒಟ���ಟಾಗಿ ಜೋಡಿಸಲ್ಪಟ್ಟ ಪಟ್ಟ ಣದ ಹಾಗೆ ಕಟ್ಟಲ್ಪಟ್ಟಿದೆ.
4ಅಲ್ಲಿಗೆ ಗೋತ್ರಗಳು, ಕರ್ತನ ಗೋತ್ರಗಳು, ಇಸ್ರಾಯೇಲಿಗೆ ಸಾಕ್ಷಿಯಾಗಿ, ಕರ್ತನ ಹೆಸರನ್ನು ಕೊಂಡಾಡುವದಕ್ಕೆ ಹೋಗುತ್ತದೆ.
5ಅಲ್ಲಿ ನ್ಯಾಯತೀರ್ವಿಕೆಗೆ ಸಿಂಹಾಸನಗಳೂ ದಾವೀದನ ಮನೆಯ ಸಿಂಹಾಸನಗಳೂ ಇರುತ್ತವೆ.
6ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥಿಸಿರಿ. ಯೆರೂಸಲೇಮನ್ನು ಪ್ರೀತಿಮಾಡುವವರು ಅಭಿವೃದ್ಧಿ ಯಾಗುವರು.
7ನಿನ್ನ ಪ್ರಾಕಾರದಲ್ಲಿ ಸಮಾಧಾನವೂ ಅರಮನೆಗಳಲ್ಲಿ ಅಭಿವೃದ್ಧಿಯೂ ಇರಲಿ.
8ನನ್ನ ಸಹೋದರರ ನಿಮಿತ್ತವೂ ನನ್ನ ಸ್ನೇಹಿತರ ನಿಮಿತ್ತವೂ ನಿನ್ನಲ್ಲಿ ಸಮಾಧಾನವಿರಲೆಂದು ಈಗ ಹೇಳುತ್ತೇನೆ.
9ನಮ್ಮ ದೇವರಾದ ಕರ್ತನ ಆಲಯದ ನಿಮಿತ್ತ ನಿನಗೆ ಒಳ್ಳೇದನ್ನು ಹುಡುಕುತ್ತೇನೆ.