Loading Bible Translation
First-time download in progress. This may take a few seconds…
Kannada Holy Bible Wordproject Bible
14 verses
1ನಮ್ಮ ದೇವರ ಪಟ್ಟಣದಲ್ಲಿ ಆತನ ಪರಿಶುದ್ಧ ಪರ್ವತದಲ್ಲಿ ಕರ್ತನು ದೊಡ್ಡ ವನೂ ಬಹಳವಾಗಿ ಸ್ತುತಿಸಲ್ಪಡುವಾತನೂ ಆಗಿದ್ದಾನೆ.
2ಉತ್ತರದ ಪಾರ್ಶ್ವಗಳಲ್ಲಿ ದೊಡ್ಡ ಅರಸನ ಪಟ್ಟಣವಾದ ಚೀಯೋನ್ ಪರ್ವತವು ರಮಣೀಯವಾ ದದ್ದೂ ಎಲ್ಲಾ ಭೂಮಿಗೆ ಸಂತೋಷಕರವಾದದ್ದೂ ಆಗಿದೆ.
3ದೇವರು ಅದರ ಅರಮನೆಗಳಲ್ಲಿ ಆಶ್ರಯ ವೆಂದು ಗೊತ್ತಾಗಿದೆ.
4ಇಗೋ, ಅರಸರುಗಳು ಕೂಡಿಕೊಂಡು ಒಟ್ಟಾಗಿ ಹಾದುಹೋದರು;
5ಅವರು ಅದನ್ನು ನೋಡಿ ಆಶ್ಚ ರ್ಯಪಟ್ಟರು; ಅವರು ಕಳವಳಪಟ್ಟು ಓಡಿ ಹೋದರು.
6ಭೀತಿಯೂ ಹೆರುವವಳ ಹಾಗೆ ನೋವೂ ಅಲ್ಲಿ ಅವರನ್ನು ಹಿಡಿಯಿತು.
7ಮೂಡಣ ಗಾಳಿಯಿಂದ ತಾರ್ಷಿಷ್ ಹಡಗುಗಳನ್ನು ನೀನು ಒಡೆಯುತ್ತೀ.
8ನಾವು ಹೇಗೆ ಕೇಳಿದೆವೋ ಹಾಗೆಯೇ ಸೈನ್ಯಗಳ ಕರ್ತನ ಪಟ್ಟಣದಲ್ಲಿ, ಅಂದರೆ ನಮ್ಮ ದೇವರ ಪಟ್ಟಣದಲ್ಲಿಯೇ ನೋಡಿದೆವು; ದೇವರು ಅದನ್ನು ಎಂದೆಂದಿಗೂ ಸ್ಥಿರಪಡಿಸುವನು. ಸೆಲಾ.
9ಓ ದೇವರೇ, ನಿನ್ನ ಪ್ರೀತಿ ಕರುಣೆಯನ್ನು ನಿನ್ನ ಮಂದಿರದ ಮಧ್ಯದಲ್ಲಿ ನಾವು ಸ್ಮರಿಸಿದ್ದೇವೆ.
10ಓ ದೇವರೇ, ನಿನ್ನ ಹೆಸರಿಗೆ ತಕ್ಕಂತಯೇ ನಿನ್ನ ಸ್ತೋತ್ರವು ಭೂಮಿಯ ಅಂತ್ಯಗಳ ವರೆಗೂ ಅದೆ. ನಿನ್ನ ಬಲಗೈ ನೀತಿಯಿಂದ ತುಂಬಿ ಅದೆ.
11ನಿನ್ನ ನ್ಯಾಯತೀರ್ವಿಕೆಗಳ ನಿಮಿತ್ತ ಚೀಯೋನ್ ಪರ್ವತವು ಸಂತೋಷಪಡಲಿ; ಯೆಹೂದದ ಕುಮಾರ್ತೆಯರು ಉಲ್ಲಾಸಪಡಲಿ.
12ಚೀಯೋನನ್ನು ಸುತ್ತಿ ಅವಳ ಸುತ್ತಲು ತಿರುಗಿ ಅದರ ಬುರುಜುಗಳನ್ನು ಲೆಕ್ಕಿಸಿರಿ.
13ಮುಂದಿನ ತಲಾಂತರಕ್ಕೆ ತಿಳಿಸುವದಕ್ಕೋಸ್ಕರ ಅದರ ಬುರುಜುಗಳ ಮೇಲೆ ಮನಸ್ಸಿಟ್ಟು ಆಕೆಯ ಅರಮನೆಗಳನ್ನು ಲಕ್ಷಿಸಿರಿ.
14ಈ ದೇವರು ಯುಗಯುಗಾಂತರಗಳಿಗೂ ನಮ್ಮ ದೇವ ರಾಗಿದ್ದಾನೆ. ಆತನು ಮರಣದ ವರೆಗೂ ನಮ್ಮನ್ನು ನಡಿಸುವನು.