Loading Bible Translation
First-time download in progress. This may take a few seconds…
Kannada Holy Bible Wordproject Bible
13 verses
1ಕರ್ತನೇ, ನಿನ್ನ ದೇಶಕ್ಕೆ ದಯೆತೋರಿಸಿದ್ದೀ; ಯಾಕೋಬನ್ನು ಸೆರೆಯಿಂದ ಹಿಂದಕ್ಕೆ ಬರ ಮಾಡಿದ್ದೀ.
2ನಿನ್ನ ಜನರ ಅಕ್ರಮವನ್ನು ಪರಿಹರಿಸಿದ್ದೀ; ಅವರ ಪಾಪವನ್ನೆಲ್ಲಾ ಮುಚ್ಚಿದ್ದೀ ಸೆಲಾ.
3ನಿನ್ನ ಕೋಪ ವನ್ನೆಲ್ಲಾ ನೀನು ತೆಗೆದುಬಿಟ್ಟಿದ್ದೀ; ನೀನು ಕೋಪದ ಉರಿಯಿಂದ ತಿರುಗಿಕೊಂಡಿದ್ದೀ.
4ನಮ್ಮ ರಕ್ಷಣೆಯ ಓ ದೇವರೇ, ನಮ್ಮ ಕಡೆಗೆ ತಿರುಗು; ನಮ್ಮ ಮೇಲಿರುವ ನಿನ್ನ ಕೋಪವನ್ನು ತೊಲ ಗಿಸು.
5ಎಂದೆಂದಿಗೂ ನಮ್ಮ ಮೇಲೆ ಕೋಪಿಸು ವಿಯೋ? ತಲತಲಾಂತರಕ್ಕೂ ನಿನ್ನ ಕೋಪವನ್ನು ಏಳ ಮಾಡುವಿಯೋ?
6ನಿನ್ನ ಜನರು ನಿನ್ನಲ್ಲಿ ಸಂತೋಷ ಪಡುವ ಹಾಗೆ ನೀನು ತಿರುಗಿ ನಮ್ಮನ್ನು ಉಜ್ಜೀವಿ ಸುವದಿಲ್ಲವೋ?
7ಓ ಕರ್ತನೇ, ನಿನ್ನ ಕರುಣೆಯನ್ನು ನಮಗೆ ದಯಪಾಲಿಸು. ನಿನ್ನ ರಕ್ಷಣೆಯನ್ನು ನಮಗೆ ಕೊಡು.
8ಕರ್ತನಾದ ದೇವರು ಏನು ಹೇಳುತ್ತಾನೋ ಅದನ್ನು ಕೇಳುವೆನು; ನಿಶ್ಚಯವಾಗಿ ಜನರಿಗೂ ತನ್ನ ಪರಿಶುದ್ಧ ರಿಗೂ ಸಮಾಧಾನದ ಮಾತು ಹೇಳುವನು; ಇನ್ನು ಬುದ್ಧಿಹೀನತ್ವಕ್ಕೆ ಅವರು ತಿರುಗಿಕೊಳ್ಳದೆ ಇರಲಿ.
9ನಿಶ್ಚ ಯವಾಗಿ ಘನವು ನಮ್ಮ ದೇಶದಲ್ಲಿ ವಾಸವಾಗಿರುವ ಹಾಗೆ, ಆತನಿಗೆ ಭಯಪಡುವವರಿಗೆ ಆತನ ರಕ್ಷಣೆಯು ಸವಿಾಪವಾಗಿದೆ.
10ಕೃಪೆಯೂ ಸತ್ಯವೂ ಸಂಧಿಸಿ ಕೊಳ್ಳುತ್ತವೆ; ನೀತಿಯೂ ಸಮಾಧಾನವೂ ಮುದ್ದಿಟ್ಟು ಕೊಳ್ಳುತ್ತವೆ.
11ಸತ್ಯವು ಭೂಮಿಯಿಂದ ಮೊಳೆಯು ವದು; ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು.
12ಹೌದು, ಕರ್ತನು ಒಳ್ಳೇದನ್ನು ಮಾಡುವನು. ನಮ್ಮ ಭೂಮಿಯು ಅದರ ಬೆಳೆಯನ್ನು ಕೊಡುವದು.
13ನೀತಿಯು ಆತನ ಮುಂದೆ ಹೋಗುತ್ತಾ ನಾವು ಆತನ ಹೆಜ್ಜೆಗಳಲ್ಲಿ ನಡೆಯುವಂತೆ ಮಾರ್ಗವನ್ನು ಮಾಡುವದು.